Showing posts with label poetry. Show all posts
Showing posts with label poetry. Show all posts

Thursday, October 28, 2010

Poem about me!

Like us mortals, you see him in the day,
At his desk, working away,
But once from office he leaves,
Gets on his wheels,
And grips the handle rod,
What to say, he FEELS LIKE GOD

(by Parikshit Basu, my collegue at Ittiam, on my completion of 5 yrs @ Ittiam)

Tuesday, February 10, 2009

ಪಠಾಣ್ ಬ್ರದರ್ಸ್

ಯೂಸುಫ್ ಮತ್ತು ಇರ್ಫಾನ್ ಪಠಾಣ
ನೋಡಿದಿರಾ ಅವರ ಅಮೋಘ ಆಟಾನ

ಬಾರಿಸುತ್ತ ಚೆಂಡನ್ನು ದಣ ದಣಾ ದಣ...
ಕೊಟ್ಟರು ಸಿಂಹಳೀಯರಿಗೆ ಭಾರಿ ಕಾಟಾನ

ಭಗವಂತ ಅವರಿಗೆ ಎಂಥ Talent ಕೊಟ್ಟಾನ...
ಮುಂದುವರಿಸಲು ಭಾರತದ ಗೆಲುವಿನ ಪರಿಪಾಟಾನ

PS: composed after Pathan brothers led India to a miraculous win against Sri Lanka in T20 match on 10th Feb 09.

Monday, February 9, 2009

मेरी हकीकत

मैं शायर तो नहीं... आशिक भी नहीं...
आपके हुस्न के दीवाना भी नहीं...
नाचीज़ तो बिलकुल नहीं... आपका पुजारी भी नहीं...
आपको सबसे ज़्यादा चाहनेवाला भी नहीं...
आपकी यादों के गुलाम भी नहीं...
मैं तो एक झूठा हूँ ... और बस झूठ ही लिखा करता हूँ।

ಕಾಡಿನ ಪಾಡು

ಸಿರಿನಾಡು, ಗಂಧದ ನಾಡು, ನಮ್ಮ ಕರುನಾಡು...
ರಸಋಷಿಗಳ ಬೀಡು ಸುಂದರ ನಾಡು,
ಆದರೆ ಮರೆಯಾಗುತಿದೆ ತೀವ್ರದಲಿ ಎಲ್ಲ ಕಾಡು,
ಹುಡುಕಿ ನೋಡು - 'ಎಲ್ಲಿ ಕಾಡು?'

ಬೆಂದಕಾಳೂರು ಮುಂದೊಮ್ಮೆ ಆಗಬಹುದು ಬೆಂದ-ಕಾಡು...
ಎಲ್ಲರಿಗೂ ಒಂದೇ ಚಿಂತೆಯಿದೆ - ತಮ್ಮ ತಮ್ಮ ಹೊಟ್ಟೆ ಪಾಡು,
ಎಚ್ಚರಗೊಳ್ಳದಿದ್ದರೆ, ನಾನೀಗಲೆ ಹೇಳುವೆ ನೋಡು -
ಬಹುಬೇಗ ಎದುರಿಸಬೇಕಾದೀತು - ಸುಡುಗಾಡು...

ಮೊದಲ ಕವನ?

ಮಿತ್ರನೊಬ್ಬ ಬರೆದನೊಂದು ಸುಂದರ ಕವನವ
ಓಡಿಬಂದು ಜಂಭದಿಂದ ತೋರಿಸಿದನು ನನಗವ

ನಾನೇನು ಕಡಿಮೆ... ಅವನದೇನು ಗರಿಮೆ...
ನಾನೂ ಬರೆವೆನು, ನನಗೂ ಉಂಟು ಹಿರಿಮೆ
ಪುಸ್ತಕಗಳನ್ನು ನಾನೂ ಓದಿರುವೆ ಹತ್ತಾರು...
ಅಲ್ಲದೆ ಕನ್ನಡದಲ್ಲಿ ನನಗೆ ಅಂಕ ತೊಂಬತ್ತಾರು

ಅಂದುಕೊಂಡು ಬರೆಯಲು ಕುಳಿತೆನು ಮಂಡೆಯೂರಿ
ಯೋಚಿಸುತ್ತಾ... ಮೆಲ್ಲಗೆ ಮೆಲಕುತ್ತಾ... ಕಡ್ಲೆಪುರಿ,
ನೋಡಬೇಕಿತ್ತು ನನ್ನ ಮೊದಲ ಯತ್ನದ ಪರಿ...
ಆಗುತ್ತಿತ್ತು ಖಂಡಿತ ನಿಮಗೆ ಕಿರಿ-ಕಿರಿ

ಒಂದು ಪದ... ಎರಡು ಪದ... ಕಾಟು-ಗೀಚು...
ಕ್ಷಣಕೊಮ್ಮೆ ನೋಡಿದೆನು ಟೈಂ ಎಷ್ಟೆಂದು ವಾಚು
ನನ್ನ ಕೈಯಿಂದ ಹತಗೈದ ಕಾಗದಗಳೆಷ್ಟು...
ಕವನ ಮುಂದುವರೆದಿದ್ದು ಮಾತ್ರ ಅಷ್ಟಕ್ಕಷ್ಟು

ಕೊನೆಗೆ ಹುಡುಕಲಾರಂಭಿಸಿದೆ ನೆಪವನ್ನು
ತಪ್ಪಿಸಿಕೊಳ್ಳಲು ಕವನ ಬರೆಯುವುದನ್ನು...
ನಂಬಿದರೆ ನಂಬಿ ಬಿಟ್ಟರೆ ಬಿಡಿ:
"ಮುರಿಯಿತು ನನ್ನ Lucky ಪೆನ್ನು !"